ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂಟಿ ಸಲಗದ ದಾಳಿಗೆ ಓರ್ವ ರೈತ ಬಲಿ

ತಮಿಳುನಾಡು: ಒಂಟಿ ಸಲಗದ ದಾಳಿಗೆ ರೈತನೊಬ್ಬ ಸಾವನ್ನಪ್ಪಿರುವ ಘಟನೆ ತಮಿಳುನಾಡು ಗಡಿಭಾಗದ ಡೆಂಕಣಿಕೋಟೆ ಸಮೀಪದ ತಿನ್ನುರೈ ಗ್ರಾಮದಲ್ಲಿ ನಡೆದಿದೆ.

35 ವರ್ಷದ ಯಲ್ಲಪ್ಪ ಕಾಡಾನೆ ದಾಳಿಗೆ ಮೃತ ಪಟ್ಟ ರೈತ. ಜಾನುವಾರುಗಳನ್ನು ಮೇಯಿಸಲು ಹೋಗಿದ್ದ ಯಲ್ಲಪ್ಪನ ಮೇಲೆ ಏಕಾಏಕಿ ಒಂಟಿ ಸಲಗ ದಾಳಿ ಮಾಡಿದೆ. ಇದರ ಪರಿಣಾಮ ರೈತ ಯಲ್ಲಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕಳೆದ ಒಂದು ವಾರದಿಂದ ಒಂಟಿ ಸಲಗ ಡೆಂಕಣಿಕೋಟೆ ಸುತ್ತಮುತ್ತಲ ಗ್ರಾಮಸ್ಥರ ನಿದ್ದೆಗೆಡಿಸಿದೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಪುಂಡಾಟ ಮಾಡುತ್ತಿರುವ ಕಾಡಾನೆಗಳನ್ನ ಅರಣ್ಯಕ್ಕೆ ಅಟ್ಟುವಂತೆ ಇಲ್ಲಿನ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ. ಸರ್ಕಾರದಿಂದ ಮೃತ ಯಲ್ಲಪ್ಪ ಕುಟುಂಬಕ್ಕೆ 50 ಸಾವಿರ ಪರಿಹಾರವನ್ನು ಘೋಷಣೆ ಮಾಡಲಾಗಿದೆ.

Edited By : Manjunath H D
PublicNext

PublicNext

07/01/2022 08:28 pm

Cinque Terre

78.93 K

Cinque Terre

0

ಸಂಬಂಧಿತ ಸುದ್ದಿ