ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದ ಹೃದಯ ಭಾಗ ಕೆ.ಎಸ್.ಆರ್.ಟಿ.ಸಿ. ಡಿಪೋ ಬಳಿಯಿರುವ ಮಂಜುನಾಥ ಸಾಮಿಲ್ ನಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದೆ.
ಇನ್ನು ಬೆಂಕಿ ಕೆನ್ನಾಲಿಗೆ ಕೋಟ್ಯಾಂತರ ರೂ. ಬೆಲೆಬಾಳುವ ಮರಗಳು ಸುಟ್ಟು ಭಸ್ಮವಾಗಿದೆ. ಧಗ ಧಗಿಸುತ್ತಿರುವ ಅಗ್ನಿ ಜ್ವಾಲೆಯನ್ನು ತಣ್ಣಗಾಗಿಸಲು ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ತರಿಕೆರೆ, ಕಡೂರಿನಿಂದ ಬಂದಿರುವ ಅಗ್ನಿಶಾಮಕ ದಳದ ವಾಹನಗಳು ಮತ್ತು ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.
ಬೆಂಕಿ ನಂದಿಸುವಲ್ಲಿ ಸುಮಾರು 12 ಅಗ್ನಿಶಾಮಕ ದಳದ ವಾಹನಗಳು ಮಧ್ಯರಾತ್ರಿಯಿಂದ ಈವರೆಗೆ ಸುಮಾರು 40 ಟ್ರಿಪ್ ಸಂಚರಿಸಿವೆ. ತಡರಾತ್ರಿ ಹೊತ್ತಿಕೊಂಡಿರುವ ಬೆಂಕಿ ಬೆಳಗಾದರೂ ಆರುತ್ತಿಲ್ಲ. ಸದ್ಯ ಶೇ. 90 ರಷ್ಟು ಬೆಂಕಿ ಆರಿಸಿರುವ ಅಗ್ನಿಶಾಮಕ ದಳದ ಸಿಬ್ಭಂದಿ ಅಕ್ಕಪಕ್ಕದ ಕಟ್ಟಡಗಳಿಗೆ ವ್ಯಾಪಿಸಬಹುದಾದ ಬೆಂಕಿಯನ್ನು ಆರಿಸಿದ್ದಾರೆ. ಅದಾಗಿಯೂ ಸಾಮಿಲ್ ಪಕ್ಕದಲ್ಲಿಯೇ ಇದ್ದ ಪ್ಲಂಬರ್ ಅಂಗಡಿಯೊಂದು ಸುಟ್ಟು ಕರಕಲಾಗಿದೆ.
ಇನ್ನು ಅಗ್ನಿ ಅವಘಡದಲ್ಲಿ ಕೋಟ್ಯಾಂತರ ರೂ. ಬೆಲೆ ಬಾಳುವ ಟನ್ ಗಟ್ಟಲೇ ಮರಗಳು, ನಾಟಗಳು ಸುಟ್ಟು ಭಸ್ಮವಾಗಿವೆ.
PublicNext
06/01/2022 08:15 am