ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವರ ಮುಂದೆ ಹಚ್ಚಿದ್ದ ದೀಪ ಉರುಳಿ ಇಡೀ ಮನೆ ಭಸ್ಮ

ಹಾವೇರಿ:ಪೂಜೆ ಮಾಡಿ ದೇವರ ಮುಂದೆ ಹೆಚ್ಚಿಟ್ಟಿದ್ದ ದೀಪ ಉರುಳಿ ಬಿದ್ದಿದೆ. ಇದರ ಪರಿಣಾಮ ಇಡೀ ಮನೆ ಬೆಂಕಿ ಹತ್ತಿ ಭಸ್ಮವಾಗಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬುಡಮಲ್ಲಿ ತಾಂಡಾದಲ್ಲಿ ಈ ಘಟನೆ ಸಂಭವಿಸಿದೆ.

ಅಂಗನವಾಡಿ ಸಹಾಯಕಿಯಾಗಿರೋ ವಿನೋಧಾ ಲಮಾಣಿ ಅವರ ಮನೆಯೇ ಈಗ ಸುಟ್ಟು ಭಸ್ಮವಾಗಿದೆ. ಈ ಅಗ್ನಿ ಅವಘಡದಲ್ಲಿ ಮನೆ ನಿರ್ಮಿಸಲು ತಂದಿದ್ದ ಮೂರು ಲಕ್ಷ ರೂಪಾಯಿ ನಗದು ಕೂಡ ಸುಟ್ಟು ಕರಕಲಾಗಿದೆ. ತಾಳಿ ಚೈನ್ ಸೇರಿ 4 ರಿಂದ 5 ತೊಲೆ ಬಂಗಾರ ಕೂಡ ಮನೆಯಲ್ಲಿತ್ತಂತೆ.

ವಿಷಯ ತಿಳಿದು ಕಂದಾಯ ಅಧಿಕಾರಿಗಳೂ ಘಟನಾ ಸ್ಥಳಕ್ಕೆ ಭೇಟಿಕೊಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದೆ. ಕಾಗಿನೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.

Edited By : Nagesh Gaonkar
PublicNext

PublicNext

04/01/2022 06:52 pm

Cinque Terre

49.33 K

Cinque Terre

0

ಸಂಬಂಧಿತ ಸುದ್ದಿ