ದಾವಣಗೆರೆ: ನಗರದ ಅರುಣ ಚಿತ್ರಮಂದಿರದ ಬಳಿ ಬಸ್ಸೊಂದು ಪಾದಚಾರಿ ಮೇಲೆ ಹರಿದ ಪರಿಣಾಮ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಉದ್ರಿಕ್ತರು ಬಸ್ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ.
ಅರುಣ ಟಾಕೀಸ್ ಬಳಿ ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಬಸ್ ಬಸಪ್ಪನ ತಲೆ ಮೇಲೆ ಹರಿದಿದೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆರಾಧ್ಯ ಸ್ಟೀಲ್ ಕಂಪೆನಿಗೆ ಸೇರಿದ ಬಸ್ ಇದಾಗಿದ್ದು, ಸ್ಥಳದಲ್ಲಿದ್ದ ಜನರು ರೊಚ್ಚಿಗೆದ್ದರು. ಈ ವೇಳೆ ಜನರ ಆಕ್ರೋಶಕ್ಕೆ ಬಸ್ ತುತ್ತಾಯಿತು. ಬಸ್ ನ ಗ್ಲಾಸ್ ಪೀಸ್ ಪೀಸ್ ಆದವು.
ಇದೇ ಸ್ಥಳದಲ್ಲಿ ಆಗಿದ್ದಾಂಗೆ ಅಪಘಾತಗಳು ನಡೆಯುತ್ತಲೆೇ ಇವೆ. ಬಸ್ ಚಾಲಕರು ವೇಗವಾಗಿ ಓಡಿಸುತ್ತಾರೆ. ಕಳೆದೊಂದು ತಿಂಗಳಲ್ಲಿ ಇದೇ ಸ್ಥಳದಲ್ಲಿ ಅಪಘಾತವಾಗಿದ್ದರೂ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಪಾದಚಾರಿ ಸಾವಿಗೆ ನ್ಯಾಯ ಸಿಗಲೇಬೇಕು. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರು ಸ್ಥಳಕ್ಕೆ ಬರಬೇಕು ಎಂದು ಸಾರ್ವಜನಿಕರು ಪಟ್ಟು ಹಿಡಿದರು. ಈ ವೇಳೆ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಬಡಾವಣೆ ಪೊಲೀಸ್ ಠಾಣೆಯ ಪೊಲೀಸರು ಗುಂಪನ್ನು ಚದುರಿಸಿ, ಟ್ರಾಫಿಕ್ ಜಾಮ್ ತೆರೆವುಗೊಳಿಸಿದರು. ದಾವಣಗೆರೆ ದಕ್ಷಿಣ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
29/12/2021 09:32 am