ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಮಿಕಲ್ ಸ್ಫೋಟ ನಾಲ್ವರ ಸಾವು

ವಡೋದರಾ: ರಾಸಾಯನಿಕ ಕಾರ್ಖಾನೆಯ ಬಾಯ್ಲರ್ ಸ್ಪೋಟಗೊಂಡು ನಾಲ್ಕು ವರ್ಷದ ಬಾಲಕಿ ಸೇರಿದಂತೆ ನಾಲ್ವರು ಸಾವನ್ನಪ್ಪಿ 11 ಜನರು ಗಾಯಗೊಂಡಿರುವ ಘಟನೆ ಗುಜರಾತಿನ ವಡೋದರಾ ಜಿಐಡಿಸಿ ಪ್ರದೇಶದಲ್ಲಿ ನಡೆದಿದೆ.

ಮೃತಪಟ್ಟವರಲ್ಲಿ 4 ವರ್ಷದ ಬಾಲಕಿ, 65 ವರ್ಷದ ಪುರುಷ, ಹದಿಹರೆಯದವರು ಮತ್ತು 30 ವರ್ಷದ ಮಹಿಳೆ ಸೇರಿದ್ದಾರೆ.

“ನಾಲ್ವರು ವ್ಯಕ್ತಿಗಳು ಸುಟ್ಟ ಗಾಯಗಳಿಂದಾಗಿ ಅಥವಾ ಸ್ಫೋಟಗೊಂಡ ಸ್ಥಳದಿಂದ ಹಾರಿದ ವಸ್ತುಗಳ ಪ್ರಬಲ ಹೊಡೆತದಿಂದ ಸಾವನ್ನಪ್ಪಿದ್ದಾರೆ. ಈಗಾಗಲೇ ಫೋರೆನ್ಸಿಕ್ ತಂಡವು ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಕ್ಕೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ಕೈಗೊಂಡಿದೆ ಎಂದು ಮಕರಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಾಜಿದ್ ಬಲೋಚ್ ಹೇಳಿದ್ದಾರೆ..

Edited By : Nirmala Aralikatti
PublicNext

PublicNext

24/12/2021 08:50 pm

Cinque Terre

59.04 K

Cinque Terre

0