ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಈಜಲು ಹೋಗಿ ಹಿರೇಬೈಲ್ ಸರ್ಕಾರಿ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ರುದ್ರಪಾದ ಬಳಿ ನಡೆದಿದೆ. ಜೀವನ್ ದಾಸ್(17) ಮೃತ ವಿದ್ಯಾರ್ಥಿ. ಇನ್ನೂ ನೀರು ಪಾಲಾಗಿರುವ ಮತ್ತೊಬ್ಬ ವಿದ್ಯಾರ್ಥಿ ನಿಕ್ಷೇಪ್ ಗಾಗಿ ಶೋಧಕಾರ್ಯ ಮುಂದುವರಿದಿದೆ.
ನಿನ್ನೆ ಕಾಲೇಜಿಗೆ ಹೋದವರು ಮನೆಗೆ ವಾಪಸ್ಸಾಗಿರಲಿಲ್ಲ ಹಾಗಾಗಿ ಇಂದು ಹುಡುಕಾಟ ನಡೆಸಿದಾಗ ಭದ್ರಾ ನದಿಯ ದಡದಲ್ಲಿ ಮೊಬೈಲ್, ಡ್ರೆಸ್ ಪತ್ತೆಯಾಗಿದೆ ನಂತರ ನೀರಲ್ಲಿ ಹುಡುಕಾಡಿದಾಗ ಈ ಅವಘಡ ಸಂಭವಿಸಿರುವುದು ಪತ್ತೆಯಾಗಿದೆ.
PublicNext
24/12/2021 04:46 pm