ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಪಾಣತ್ತೂರು ಬಳಿ ಲಾರಿ ಪಲ್ಟಿ: ನಾಲ್ವರು ಕಾರ್ಮಿಕರ ದುರ್ಮರಣ

ಸುಳ್ಯ: ಕಲ್ಲಪಳ್ಳಿ ಬಳಿ ದೊಡ್ಡ ಮನೆ ಎಂಬಲ್ಲಿಂದ ಕೇರಳದ ಕಡೆ ಹೊರಟಿದ್ದ ಲಾರಿ ಪಲ್ಟಿಯಾಗಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಲಾರಿಯ ಬ್ರೇಕ್ ಫೇಲ್ ಆಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ಲಾರಿಯು ರಬ್ಬರ್ ಮರದ ದಿಮ್ಮಿಗಳನ್ನು ಹೇರಿಕೊಂಡು ಕೇರಳಕ್ಕೆ ಹೊರಟಿತ್ತು. ದಿಮ್ಮಿಗಳ ಮೇಲೆ ಕುಳಿತು ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಏಕಾಏಕಿ ಲಾರಿಯ ಬ್ರೇಕ್ ಕೈಕೊಟ್ಟಿದೆ. ಲಾರಿಯಲ್ಲಿ ಒಟ್ಟು ಒಂಬತ್ತು ಮಂದಿ ಕಾರ್ಮಿಕರಿದ್ದರು. ಘಟನೆಯಲ್ಲಿ ಇಬ್ಬರು ಕಾರ್ಮಿಕರು ಲಾರಿಯಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡು ಉಳಿದ ನಾಲ್ವರು ಕಾರ್ಮಿಕರು ಉಸಿರು ಚೆಲ್ಲಿದ್ದಾರೆ. ಗಾಯಗೊಂಡವರನ್ನು ಕಾಯಂಗಾಡ್ ಬಳಿಯ ಕೂಡಂಗಲ್ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಇದೇ ಪರಿಸರದಲ್ಲಿ ಕೆಲವು ತಿಂಗಳ ಹಿಂದೆ ಬಸ್ ಪಲ್ಟಿಯಾಗಿ ಹಲವಾರು ಮಂದಿ ಗಾಯಗೊಂಡಿದ್ದರು.

Edited By : Manjunath H D
PublicNext

PublicNext

23/12/2021 09:22 pm

Cinque Terre

73.9 K

Cinque Terre

0