ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
ಯಾದಗಿರಿ: ನಡು ರಸ್ತೆಯಲ್ಲೆ ಭತ್ತದ ಹುಲ್ಲು ಸಾಗಿಸುತ್ತಿದ ಟ್ರ್ಯಾಕ್ಟರಗೆ ಏಕಾಏಕಿ ಬೆಂಕಿ ತಗುಲಿ ಹುಲ್ಲು ಧಗಧಗನೆ ಹೊತ್ತಿ ಹುರಿದಿರೋ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರದ ವಾಲ್ಮೀಕಿ ವೃತ್ತದ ಬಳಿ ನಡೆದಿದೆ.
ಈ ಬೆಂಕಿ ಅವಘಡ ಸಂಭವಿಸಿದ್ದರಿಂದ ಪಟ್ಟಣದ ರಸ್ತೆ ಬಳಿಯಲ್ಲಿರುವ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ಗಾಬರಿಯಿಂದ ಓಡೋಡಿ ಹೋದರು. ಅಲ್ಲದೇ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿರಾದರು ಪ್ರಯೋಜನವಾಗಲಿಲ್ಲ. ಮತ್ತಷ್ಟು ಬೆಂಕಿ ಜಾಸ್ತಿಯಾಗಿತ್ತು.
ಇನ್ನು ರಸ್ತೆ ಬದಿಯಲ್ಲಿ ಕಸಕ್ಕೆ ಬೆಂಕಿ ಹಚ್ಚಿದ್ದರಿಂದ ಬೆಂಕಿ ಕಿಡಿ ಟ್ರ್ಯಾಕ್ಟರ್ ನಲ್ಲಿದ್ದ ಮೇವಿಗೆ ತಗುಲಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಏಕಾಏಕಿ ಹೊತ್ತಿ ಉರಿದ ಬೆಂಕಿಯಿಂದ ಕೆಲ ಕಾಲ ಸಂಚಾರಕ್ಕೆ ಅಡ್ಡಿಯಾಗಿದ್ದು, ಒಂದೆಡೆಯಾದರೆ.. ಪಟ್ಟಣದಲ್ಲಿ 25 ನಿಮಿಷಕ್ಕೂ ಹೆಚ್ಚು ಹೊಗೆ ಆವರಿಸಿಕೊಂಡಿತ್ತು.ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಇನ್ನು ಈ ಘಟನೆ ನಾರಾಯಣಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
PublicNext
19/12/2021 06:41 pm