ಕರಾಚಿ: ಪಾಕಿಸ್ತಾನದ ಕರಾಚಿ ಸಮೀಪದ ಶೇರ್ಷಾ ಪ್ರದೇಶದ ಪರಚಾ ಚೌಕ್ ಬಳಿ ಶನಿವಾರ ಅನಿಲ ಸ್ಫೋಟ ಸಂಭವಿಸಿದೆ. ಪರಿಣಾಮ 10 ಜನ ಮೃತಪಟ್ಟು 12 ಮಂದಿ ಗಾಯಗೊಂಡಿದ್ದಾರೆ ಸ್ಥಳೀಯ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಖಾಸಗಿ ಬ್ಯಾಂಕ್‌ನ ಕೆಳಗಿರುವ ಒಳಚರಂಡಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಎಸ್‌ಎಚ್‌ಒ ಜಾಫರ್ ಅಲಿ ಷಾ ಹೇಳಿದ್ದಾರೆ. ಸ್ಫೋಟದ ಅವಶೇಷಗಳನ್ನು ತೆರವುಗೊಳಿಸಲು ನೋಟಿಸ್ ನೀಡಲಾಗಿದೆ. ಕಟ್ಟಡದ ಕೆಳಗಿನ ಸ್ಥಳದಲ್ಲಿ ಅನಿಲಗಳು ಶೇಖರಿಸಿರುವುದು ಸ್ಫೋಟಕ್ಕೆ ಕಾರಣ ಎಂದು ಶಂಕಿಸಲಾಗಿದೆ.
PublicNext
18/12/2021 07:09 pm