ಚಾಮರಾಜನಗರ: ಗ್ಯಾಸಸ್ ಸಿಲಿಂಡರ್ ಸ್ಪೋಟದ ಪರಿಣಾಮ ಒಂದೇ ಸೂರಿನ ಎರಡು ಮನೆ ಸುಟ್ಟು ಭಸ್ಮವಾಗಿವೆ.
ಚಾಮರಾಜನಗರ ಜಿಲ್ಲೆಯ ಕೊಳ್ಳಗಾ ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದ ಕೋಟೆ ಬೀದಿಯಲ್ಲಿ
ಈ ಘಟನೆ ನಡೆದಿದೆ.
ಚಿಕ್ಕರಾವಳಯ್ಯ ಹಾಗೂ ಮಂಜು ಎಂಬುವವರ ಮನೆ ಸಿಲೆಂಡರ್ ಸ್ಪೋಟದಿಂದ ಸುಟ್ಟು ಕರಕಲಾಗಿವೆ.ಸಿಲಿಂಡರ್ ಸ್ಪೋಟದ ತೀವ್ರತೆಗೆ ಮನೆಯ ಮೇಲ್ಚಾವಣಿ ಹಾರಿ ಹೋಗಿದೆ.
ಬೆಂಕಿ ಕಾಣಿಸಿಕೊಂಡ ಕೂಡಲೇ ಮನೆ ಮಂದಿ ಮನೆಯಿಂದ ಹೊರ ಬಂದು ಬಚಾವ್ ಆಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
PublicNext
18/12/2021 10:17 am