ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಲಾ ಬಸ್ ಗೆ ಕಬ್ಬು ಹೊತ್ತ ಟ್ರ್ಯಾಕ್ಟರ್ ಡಿಕ್ಕಿ, ಸ್ವಲ್ಪದರಲ್ಲೇ ತಪ್ಪಿದ ಭಾರಿ ಅನಾಹುತ

ಬಾಗಲಕೋಟೆ : ಶಾಲಾ ವಾಹನಕ್ಕೆ ಕಬ್ಬು ತುಂಬಿದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬಸ್ ವಿದ್ಯುತ್ ಕಂಬಕ್ಕೆ ವಾಲಿ ದೊಡ್ಡ ಅನಾಹುತ ಒಂದು ತಪ್ಪಿದೆ‌.

ಈ ಘಟನೆ ನಡೆದಿರುವುದು ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಾಮಪೂರ ಗ್ರಾಮದಲ್ಲಿ . ರಾಮಪೂರ ಗ್ರಾಮದ ಪೂರ್ಣ ಪ್ರಜ್ಞ ಶಾಲಾ ಮಕ್ಕಳನ್ನ ಬಸ್ ನಲ್ಲಿ ಹೊತ್ತೊಯ್ಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಶಾಲಾ ವಾಹನದಲ್ಲಿದ್ದ 35 ಜನ ಮಕ್ಕಳು ಹಾಗೂ 4 ಜನ ಶಿಕ್ಷಕರಿದ್ದು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಪೊಲೀಸರು ಮತ್ತು ಸ್ಥಳೀಯರ ಸಹಾಯದೊಂದಿಗೆ ಮಕ್ಕಳನ್ನು ರಕ್ಷಣೆಮಾಡಲಾಗಿದೆ.ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Nagesh Gaonkar
PublicNext

PublicNext

13/12/2021 04:13 pm

Cinque Terre

52.97 K

Cinque Terre

0