ಗದಗ: ಟ್ರ್ಯಾಕ್ಟರ್ ಮೇಲಿಂದ ಆಯತಪ್ಪಿ ಬಿದ್ದು ಶಾಲಾ ಬಾಲಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಬಳಿ ನಡೆದಿದೆ.
ಶೋಭಾ ಹಂಗನಕಟ್ಟಿ (10) ಮೃತ ಬಾಲಕಿ. ಹೊಸಳ್ಳಿಯಿಂದ ಕಡಕೋಳ ಸರ್ಕಾರಿ ಶಾಲೆಗೆ ಹೋಗಲು ಬಸ್ ಬಾರದ ಕಾರಣ ಬಾಲಕಿಯು ಟ್ರ್ಯಾಕ್ಟರ್ ಏರಿ ಹೊರಟಿದ್ದಳು. ಮಾರ್ಗ ಮಧ್ಯೆಯ ತಿರುವಿನಲ್ಲಿ ಆಯತಪ್ಪಿ ಟ್ರಾಕ್ಟರ್ ನಿಂದ ನೆಲಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಈ ಹಿಂದೆ ಕೂಡ ಬಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅದು ಈಡೇರದೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಲಕಿ ಸಾವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
03/12/2021 01:50 pm