ಬಾಗಲಕೋಟೆ: ನದಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕ ನೀರು ಪಾಲಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಾಮತಾಳ ಬ್ರಿಡ್ಜ್ ಬಳಿ ನಡೆದಿದೆ.
ತಜಮೀರ್ ಮೈನುದ್ದೀನ್ (20) ನೀರುಪಾಲಾದ ಯುವಕ ಮೂಲತಃ ವಿಜಯಪುರ ಜಿಲ್ಲೆಯವನಾದ ಈತ ಕಮತಗಿ ಪಟ್ಟಣದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ,ತಮ್ಮ ಊರಿಗೆ ವಾಪಸ್ ಹೋಗುವ ವೇಳೆ ಫೋಟೋ ತೆಗೆದುಕೊಳ್ಳಲು ಹೋಗಿ ನದಿಗೆ ಇಳಿದ ವೇಳೆ ಕಾಲು ಜಾರಿ ಯುವಕ ನೀರುಪಾಲಾಗಿದ್ದಾನೆ.
ಯುವಕನ ಶವವನ್ನು ಸ್ಥಳೀಯ ಮೀನುಗಾರರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಡಿ ಹೊರತೆಗೆದಿದ್ದಾರೆ. ಸ್ಥಳಕ್ಕೆ ಅಮಿನಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
01/12/2021 04:02 pm