ಚಂಡೀಗಢ: ಮದುವೆ ಮುಗಿಸಿ ಕಾರಿನಲ್ಲಿ ವಾಪಸ್ ಬರುತ್ತಿದ್ದ ವೇಳೆ ಎರಡು ಕಾರುಗಳ ಮಧ್ಯೆ ಡಿಕ್ಕಿ ಸಂಭವಿಸಿ ಆರು ಮಂದಿ ಮೃತಪಟ್ಟಿರುವ ಘಟನೆ ಹರಿಯಾಣದ ಕೈತಾಲ್ ನಲ್ಲಿ ನಡೆದಿದೆ.
ವಿಪರ್ಯಾಸವೆನ್ನುವಂತೆ ಡಿಕ್ಕಿಯಾಗಿರುವ ಎರಡೂ ವಾಹನಗಳಲ್ಲಿನ ಜನ ಮದುವೆ ಸಮಾರಂಭಕ್ಕೇ ಹೋಗಿದ್ದರು ಎನ್ನಲಾಗಿದೆ. ಎರಡೂ ಕಾರು ಸೇರಿ ಒಟ್ಟು 10 ಮಂದಿ ಪ್ರಯಾಣಿಸುತ್ತಿದ್ದು ಆ ಪೈಕಿ ಆರು ಮಂದಿ ಸ್ಥಳೀಯದಲ್ಲಿಯೇ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಸತ್ಯಮ್ (26), ರಮೇಶ್ (55), ಅನಿಲ್ (55) ಶಿವಮ್ (20), ವಿನೋದ್ (34) ಅವರ ಅವರ ಪತ್ನಿ ರಾಜ್ಬಲಾ (27) ಎಂದು ಗುರುತಿಸಲಾಗಿದೆ. ವಿನೋದ್, ರಾಜ್ಬಲಾ ಪುತ್ರ ವಿರಾಜ್ (7) ವಿಪರೀತ ಗಾಯಗೊಂಡಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
PublicNext
30/11/2021 05:47 pm