ಹಾವೇರಿ : ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಹೋರಿ ಬೆದರಿಸೋ ಸ್ಪರ್ಧೆಯಲ್ಲಿ 25 ಕ್ಕೂ ಹೆಚ್ಚು ಯುವಕರಿಗೆ ಹೋರಿ ಗುದ್ದಿದ ಪರಿಣಾಮ ಯುವಕರು ತೀವ್ರವಾಗಿ ಗೊಂಡಿದ್ದಾರೆ.ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಇದರಿಂದಾಗಿ ಬಸಾಪುರ ಗ್ರಾಮದಲ್ಲಿ ನಡೆದ ಹೋರಿ ಬೆದರಿಸೋ ಸ್ಪರ್ಧೆ ರದ್ದಾಗಿದೆ. ಸದ್ಯ ಗಾಯಾಳುಗಳನ್ನು ಹಾವೇರಿ ಜಿಲ್ಲಾಸ್ಪತ್ರೆ ,ಗುತ್ತಲ ಆಸ್ಪತ್ರೆ, ಹಾಗೂ ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿದೆ.
ಶಿವಾನಂದ ಕುಲಕರ್ಣಿ,ಸಚಿನ್,ಶಿವಕುಮಾರ್, ಅರುಣ್,ಶ್ರೀಧರ್,ಮಂಜಪ್ಪ,ಪ್ರವೀಣ,ಸಂತೋಷ ಸೇರಿದಂತೆ 25 ಕ್ಕೂ ಹೆಚ್ಚು ಯುವಕರು ಆಸ್ಪತ್ರೆ ಸೇರಿದ್ದಾರೆ.
ಸ್ಪರ್ಧೆ ವೇಳೆ ಹೋರಿಗಳ ತುಳಿತಕ್ಕೊಳಗಾದ ಕೆಲವರಿಗೆ ಉಸಿರಾಟದ ತೊಂದರೆ ಕೂಡ ಆಗಿದೆ. ಘಟನೆ ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
PublicNext
29/11/2021 06:15 pm