ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಬಸ್-ಕಾರ್ ಮುಖಾಮುಖಿ ಡಿಕ್ಕಿ: ಶಾಸಕರ ಅಳಿಯ ಸೇರಿ ನಾಲ್ವರು ಸಾವು

ವಿಜಯಪುರ: ಸಾರಿಗೆ ಬಸ್ ಹಾಗೂ ಫಾರ್ಚೂನರ್ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಈ ಘಟನೆ ರವಿವಾರ ರಾತ್ರಿ ನಡೆದಿದೆ.

ಮೃತರೆಲ್ಲರೂ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ನಾಂದೇಡ ಮೂಲದವರಾಗಿದ್ದಾರೆ. ಚಿದಾನಂದ ನಾಗೇಶ ಸೂರ್ಯವಂಶಿ (45), ಶಾಸಕ‌ ದೇವಾನಂದ ಚವ್ಹಾಣ ಅವರ ಹಿರಿಯ ಸಹೋದರಿಯ ಪುತ್ರ ವಿಜಯಕುಮಾರ್ ದೊಡಮನಿ(32) ಸೋಮನಾಥ ಕಾಳೆ (43) ಸಂದೀಪ ಪವಾರ (40) ಎಂಬುವವರೇ ಮೃತ ದುರ್ದೈವಿಗಳು. ಫಾರ್ಚುನರ್ ಕಾರ್ ಚಾಲಕನ ಅತಿವೇಗ ಹಾಗೂ ಅಜಗರೂಕತೆಯ ಚಾಲನೆಯೇ ಘಟನೆ ಗೆ ಕಾರಣ ಎನ್ನಲಾಗಿದೆ. ಎಂಎಚ್ 13 ಸಿಎಸ್ 3330 ನಂಬರಿನ ಪಾರ್ಚ್ಯೂನರ್ ಕಾರ್ ಇದಾಗಿದ್ದು ಎದುರಿನಿಂದ ಬಂದ ಕೆಎ 22 ಎಫ್ 2198 ನಂಬರಿನ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ಕೆ ನರಗುಂದ ಪಟ್ಟಣದಿಂದ ವಿಜಯಪುರಕ್ಕೆ ಬಸ್ ಆಗಮಿಸಿತ್ತು ಎನ್ನಲಾಗಿದೆ. ಸ್ಥಳಕ್ಕೆ ನರಗುಂದ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Edited By : Manjunath H D
PublicNext

PublicNext

29/11/2021 08:24 am

Cinque Terre

86.04 K

Cinque Terre

3