ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂತ್ಯ ಸಂಸ್ಕಾರಕ್ಕೆ ಹೊರಟವರು ಮಸಣ ಸೇರಿದರು: ಬಂಗಾಳದಲ್ಲಿ ಭೀಕರ ಅಪಘಾತ

ನದಿಯಾ( ಪಶ್ಚಿಮ ಬಂಗಾಳ): ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದವರ ವಾಹನಕ್ಕೆ ಟ್ರಕ್ ಗುದ್ದಿದ ಪರಿಣಾಮ ಸ್ಥಳದಲ್ಲೇ 18 ಮಂದಿ ಮೃತಪಟ್ಟಿದ್ದಾರೆ. ಹಾಗೂ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ಫುಲ್ ಬುರಿ ಪ್ರದೇಶದಲ್ಲಿ ಈ ಅನಾಹುತ ಸಂಭವಿಸಿದೆ. ಇಂದು ನಸುಕಿನ ಜಾವ ಮೂರು ಗಂಟೆಗೆ ಘಟನೆ ನಡೆದಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಪರ್ಯಾಸವೆಂದರೆ ಮೃತರೆಲ್ಲ ಶವದ ಮೆರವಣಿಗೆ ವಾಹನದಲ್ಲೇ ಸ್ಮಶಾನಕ್ಕೆ ತೆರಳುತ್ತಿದ್ದರು.

ಹಿಂಬದಿಯಿಂದ ಬಂದ ಟ್ರಕ್ ರಭಸವಾಗಿ ಶವದ ವಾಹನಕ್ಕೆ ಢಿಕ್ಕಿಯಾಗಿದೆ‌. ಟ್ರಕ್ ನಲ್ಲಿ ಕಲ್ಲು ತುಂಬಿದ್ದರಿಂದ ಶವದ ವಾಹನದಲ್ಲಿದ್ದ 18 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 10 ಮಂದಿ ಪುರುಷರು, 7 ಜನ ಮಹಿಳೆಯರು ಹಾಗೂ ಒಂದು ಮಗು ಸೇರಿದೆ. ಇನ್ನು ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಂಬನಿ ಮಿಡಿದಿದ್ದಾರೆ‌.

Edited By : Nagesh Gaonkar
PublicNext

PublicNext

28/11/2021 05:09 pm

Cinque Terre

100.15 K

Cinque Terre

0

ಸಂಬಂಧಿತ ಸುದ್ದಿ