ಹಾವೇರಿ: ರಸ್ತೆಯಲ್ಲಿ ಆಳವಾದ ಗುಂಡಿಗಳಿಂದ ಮಾರುಕಟ್ಟೆ ಗೆ ಹೋಗುತ್ತಿದ್ದ ಟ್ಯಾಕ್ಟರ್ ಪಲ್ಟಿ ಹೊಡೆದು ಅದರಲ್ಲಿದ್ದ ಮೆಕ್ಕೆಜೋಳದ ಕಾಳುಗಳು ರಸ್ತೆಗೆ ಬಿದ್ದ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕಾಕೋಳ ತಾಂಡಾದ ಬಳಿ ನಡೆದಿದೆ.
ಇದರಿಂದಾಗಿ ಒಂದು ಕೀ ಮೀ ದೂರದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು, ಸುರೇಶ್ ಹರಿಜನ ಎಂಬ ರೈತನಿಗೆ ಸೇರಿದ 10-12 ಕ್ವಿಂಟಾಲ್ ಇರುವ ಚೀಲದ ಮೆಕ್ಕೆಜೋಳ ನೆಲಸಮವಾಗಿದ್ದು ಇದರಿಂದ ಸುಮಾರು 15 ಸಾವಿರಕ್ಕೂ ಅಧಿಕ ನಷ್ಟವೆಂದು ಅಂದಾಜಿಸಲಾಗಿದೆ.
ಸುಮಾರು 30 ಟನ್ ಹೊತ್ತು ಹೋಗುವ ಕಲ್ಲಿನ ಲಾರಿಗಳು ಓಡಾಟದ ಹಿನ್ನಲೆಯಲ್ಲಿ ರಸ್ತೆಯಲ್ಲಿ ಆಳವಾದ ಗುಂಡಿಗಳಾಗಿದ್ದು, ಕೂಡಲೇ ರಿಪೇರಿ ಮಾಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
PublicNext
28/11/2021 03:12 pm