ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ ಬ್ರೇಕಿಂಗ್: ವೇಗಕ್ಕೆ ಪ್ರಾಣತೆತ್ತ ಸವಾರ- ತಲೆ ಮೇಲೆ ಹರಿದ KSRTC ಬಸ್‌

ದಾವಣಗೆರೆ: ಕೆಎಸ್ಆರ್‌ಟಿಸಿ ಬಸ್ ಓವರ್ ಟೇಕ್ ಮಾಡಲು ಹೋಗಿ ಸ್ಕೂಟಿ ಸವಾರ ಪ್ರಾಣತೆತ್ತ ಘಟನೆ ಹರಪನಹಳ್ಳಿ ಪಟ್ಟಣದಲ್ಲಿ ನಡೆದಿದೆ.

ಅಸೀಫ್ (20) ಅಪಘಾತದಲ್ಲಿ ಮೃತಪಟ್ಟ ಯುವಕ. ಸ್ಕೂಟಿಯಲ್ಲಿ ವೇಗವಾಗಿ ಬಂದ ಅಸೀಫ್ ಕೆಎಸ್ಆರ್‌ಟಿಸಿ ಬಸ್ ಓವರ್ ಟೇಕ್ ಮಾಡಲು ಯತ್ನಿಸಿದ್ದ. ಆದರೆ ನಿಯಂತ್ರಣ ತಪ್ಪಿ ಬಸ್‌ ಅಡಿಗೆ ಬಿದ್ದಿದ್ದಾನೆ. ಪರಿಣಾಮ ಅಸೀಫ್ ತಲೆ ಮೇಲೆ ಬಸ್‌ ಹರಿದಿದ್ದು, ಸ್ಥಳದಲ್ಲೇ ಆತನ ಸಾವನ್ನಪ್ಪಿದ್ದಾನೆ.

ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಅಪಘಾತ ಭಯಾನಕ ದೃಶ್ಯವು ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಹರಪನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Manjunath H D
PublicNext

PublicNext

28/11/2021 01:52 pm

Cinque Terre

79.45 K

Cinque Terre

0

ಸಂಬಂಧಿತ ಸುದ್ದಿ