ಮೈಸೂರು: ಜೀವ ಇದ್ರೆ ಸಾವಿರ ಸೆಲ್ಫಿ ತೆಗೆದುಕೊಳ್ಳಬಹುದು. ಜೀವಾನೇ ಹೋದ್ರೆ.. ಹಾಗಾಗಿ ಸೆಲ್ಫಿ ಗೀಳಿಗೆ ಬಿದ್ದು ಜೀವ ಬಲಿಕೊಡದಿರಿ.
ಸದ್ಯ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಮುಂದಾದ ಮೂವರು ಯುವಕರಲ್ಲಿ ಇಬ್ಬರು ನೀರುಪಾಲಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕೆಂಚನ ಕೆರೆಯಲ್ಲಿ ನಡೆದಿದೆ.
ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ವೇಳೆ ಜೊತೆಗಿದ್ದವನ ಕಣ್ಣೆದುರೇ ಇಬ್ಬರು ಗೆಳೆಯರನ್ನು ಕಳೆದುಕೊಂಡಂತಾಗಿದೆ. ಅಬ್ದುಲ್ಲಾ (21) ಹಾಗೂ ತನ್ವೀರ್ (20) ಎಂಬ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿ ಮೃತಪಟ್ಟಿದ್ದಾರೆ. ಜತೆಗಿದ್ದ ಇನ್ನೊಬ್ಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕೆರೆ ಏರಿ ಮೇಲೆ ಈ ಮೂವರು ಗೆಳೆಯರು ಸೆಲ್ಫಿ ತೆಗೆದುಕೊಳ್ಳುವ ವೇಳೆ ಈ ಅವಘಡ ಸಂಭವಿಸಿದೆ. ಶವಗಳನ್ನು ಹುಣಸೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
22/11/2021 07:17 pm