ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀಗುರುಲಿಂಗ ದೇವರ ಕಾರು ಗುದ್ದಿ ಪಾದಚಾರಿಗಳು ಖಲಾಸ್

ಕಲಬುರಿ:ಯಡ್ರಾಮಿ ತಾಲೂಕಿನ ಯಲಗೋಡ ಮಠದ ಶ್ರೀಗುರುಲಿಂಗ ದೇವರು ಸಂಚರಿಸುತ್ತಿದ್ದ ಫಾರ್ಚುನರ್ ಕಾರು ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಪಾದಚಾರಿಗಳು ಮೃತಪಟ್ಟದ್ದಾರೆ. ತಾಲೂಕಿನ ಫರ್ತಾಬಾದ್ ಬಳಿಯ ಬೀದರ್ ಶ್ರೀರಂಗಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.

ಫಾರ್ಚುನರ್ ಡಿಕ್ಕಿಯಿಂದ ಮೃತಪಟ್ಟವರನ್ನ ಶಿವಸರಣಪ್ಪ ಮತ್ತು ಗುಂಮ್ಮ ಎಂದು ಗುರುತಿಸಲಾಗಿದೆ.ಈ ಅಪಘಾತದಿಂದ ಫಾರ್ಚುನರ್ ಕಾರ್‌ ನಲ್ಲಿದ್ದ ಶ್ರೀಗುರುಲಿಂಗ ದೇವರು ಹಾಗೂ ಕಾರ್ ಚಾಲಕನಿಗೆ ಗಾಯವಾಗಿದೆ. ಇವರನ್ನ ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಂಚಾರಿ ಠಾಣೆ ಸಿಪಿಐ ಶಾಂತಿನಾಥ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Edited By : Nagesh Gaonkar
PublicNext

PublicNext

19/11/2021 07:06 pm

Cinque Terre

82.36 K

Cinque Terre

1