ಬೆಂಗಳೂರು: ಇತ್ತೀಚೆಗೆ ದೊಡ್ಡವರನ್ನು ಹಿಡಿದು ಚಿಕ್ಕವರವರೆಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ತುಸು ಹೆಚ್ಚಾಗಿಯೇ ಆಸಕ್ತಿ ತೋರುತ್ತಾರೆ.ಅದೇ ರೀತಿ ಇಲ್ಲೊಬ್ಬ ಯುವಕ ಚಲಿಸುವ ರೈಲಿನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.19 ವರ್ಷದ ಯುವಕ ಅಭಿಷೇಕ್ ಮೃತ ದುರ್ದೈವಿ. ಬೆಂಗಳೂರಿನ ಗಾಂಧಿನಗರದ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್, ಪೂಜೆ ನಿಮಿತ್ತ ನವೆಂಬರ್ 8 ರಂದು ಪಾಂಡವಪುರಕ್ಕೆ ರೈಲಿನಲ್ಲಿ ಸ್ನೇಹಿತರೊಂದಿಗೆ ತೆರಳುತ್ತಿದ್ದರು.
ಶ್ರೀರಂಘಪಟ್ಟಣ ಬಳಿ ಕಾವೇರಿ ನದಿಯ ಸೇತುವೆ ಮೇಲೆ ರೈಲು ಸಾಗುತ್ತಿದ್ದ ವೇಳೆ ಬಾಗಿಲಲ್ಲಿ ನಿಂತು ಪೋಟೋ – ವಿಡಿಯೋ ಚಿತ್ರೀಕರಿಸಲು ಯತ್ನಿಸಿ ಕಾಲು ಜಾರಿ ನದಿಗೆ ಬಿದ್ದಿದ್ದಾರೆ.ಇನ್ನು ಪಾಂಡವಪುರದಲ್ಲಿ ರೈಲಿನಿಂದ ಇಳಿದ ಸ್ನೇಹಿತರು ಅಭಿಷೇಕ್ ಗಾಗಿ ಹುಡುಕಾಟ ನಡೆಸಿದ್ದಾರೆ. ಪೋಷಕರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸ್ನೇಹಿತರ ಜೊತೆ ಪಾಂಡವಪುರಕ್ಕೆ ತೆರಳಿದ್ದ ಸುದ್ದಿ ಮೇಲೆ ಮಂಡ್ಯ ರೈಲ್ವೆ ಪೊಲೀಸರ ಸಹಾಯದಿಂದ ಹುಡುಕಾಟ ನಡೆಸಿದಾಗ ನವೆಂಬರ್ 14 ರಂದು ಶ್ರೀರಂಗಪಟ್ಟಣ ಬಳಿ ಮೃತದೇಹ ಪತ್ತೆಯಾಗಿದೆ. ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
PublicNext
18/11/2021 02:08 pm