ಬೆಂಗಳೂರು: ಗಂಗೊಂಡನಹಳ್ಳಿಯ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಕಂಬ ದುರಸ್ತಿ ವೇಳೆ ಅವಘಡ ನಡೆದಿದೆ.ಇಂದು ಮುಂಜಾನೆ ಯಿಂದ ಬೆಸ್ಕಾಂ ಸಿಬ್ಬಂದಿ ಕಂಬಗಳ ವಯರ್ ತೆರವು ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಶಿಥಿಲಗೊಂಡಿದ್ದ ಕಂಬವೊಂದು ನೆಲಕಚ್ಚಿದೆ, ಸದ್ಯ ಮೂರ್ನಾಲ್ಕು ವಾಹನಗಳು ಜಖಂ ಗೊಂಡಿವೆ.. ಒಂದು ಆಟೋ ಹಾಗೂ ಎರಡು ಬೈಕ್ ಗಳು ಜಖಂಗೊಂಡಿದ್ದು ಬೆಸ್ಕಾಂ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಈ ರೀತಿ ಮೇನ್ ರೋಡ್ ಮೇಲೆ ಅವಘಡ ಸಂಭವಿಸಿದೆ.ಸದ್ಯ ಯಾವುದೇ ಪ್ರಾಣ ಹಾನಿಯಾಗಿಲ್ಲ.
PublicNext
17/11/2021 04:43 pm