ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಪಾದಚಾರಿಗಳತ್ತ ನುಗ್ಗಿದ ಕಾರು- ಮಹಿಳೆಯರು ಗ್ರೇಟ್ ಎಸ್ಕೇಪ್.!

ಮೈಸೂರು: ಕಾರೊಂದು ಪಾರ್ಕಿಂಗ್ ಜಾಗದಿಂದ ಪಾದಚಾರಿಗಳ ಮೇಲೆ ನುಗ್ಗಿದ ಘಟನೆ ಮೈಸೂರಿನ ಅರಸು ರಸ್ತೆಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಇಬ್ಬರು ಮಹಿಳೆಯರು ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ.

ಈ ಘಟನೆಯು ಮೂರು ದಿನಗಳ ಹಿಂದೆ ನಡೆಸಿದ್ದು, ಸದ್ಯ ಸಿಸಿಟಿವಿ ಕ್ಯಾಮೆರಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರು ಪಾದಚಾರಿ ಮಹಿಳೆಯರು ಫುಟ್‌ಪಾತ್ ಮೇಲೆ ನಿಂತಿದ್ದರು. ಪಾರ್ಕಿಂಗ್ ಮಾಡುವ ವೇಳೆ ನಿಯಂತ್ರಣ ತಪ್ಪಿದ ಕಾರು ಮಹಿಳೆಯರ ಕಡೆಗೆ ನುಗ್ಗಿದೆ. ಇದನ್ನು ಗಮನಿಸಿದ ಅವರು ತಕ್ಷಣವೇ ತಪ್ಪಿಸಿಕೊಂಡಿದ್ದಾರೆ. ಆದರೆ ಒಬ್ಬರ ಕಾಲಿಗೆ ಕಾರು ಡಿಕ್ಕಿ ಹೊಡೆದಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

Edited By : Shivu K
PublicNext

PublicNext

17/11/2021 11:15 am

Cinque Terre

64.58 K

Cinque Terre

0

ಸಂಬಂಧಿತ ಸುದ್ದಿ