ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಫ್ರಿಕಾದಲ್ಲಿ ಭೀಕರ ದುರಂತ: ಟ್ಯಾಂಕರ್ ಸ್ಫೋಟವಾಗಿ 92 ಜನ ಸಾವು

ಆಫ್ರಿಕಾದ ಸಿಯೇರಾ‌ ಲಿಯೋನ್ ನಲ್ಲಿ ಭಾರಿ ದುರಂತ ಸಂಭವಿಸಿದೆ. ಇಂಧನ ಟ್ಯಾಂಕರ್ ಸೋರಿಕೆ ಪರಿಣಾಮ ಸ್ಫೋಟ ಸಂಭವಿಸಿ 92 ಜನ ದುರ್ಮರಣ ಹೊಂದಿದ್ದಾರೆ.

ಇಂಧ‌ನ ಟ್ಯಾಂಕರ್ ಸೋರಿಕೆಯಾದ ಕಾರಣ ಇಂಧನ ತುಂಬುಕೊಳ್ಳಲು ನೂರಾರು ಜನ ಟ್ಯಾಂಕರ್ ಸುತ್ತಲೂ ಜಮಾಯಿಸಿದ್ದಾರೆ. ಇದೇ ವೇಳೆ ಭಾರಿ ಸ್ಫೋಟ ಸಂಭವಿಸಿ 92 ಜನ ಮೃತಪಟ್ಟಿದ್ದಾರೆ. ಇಷ್ಟೇ ಅಲ್ಲ‌. ಸುತ್ತ ಪಾರ್ಕ್ ಮಾಡಲಾಗಿದ್ದ ಕಾರುಗಳು ಬೈಕ್ ಗಳು ಹಾಗೂ ಇತರ ವಾಹನಗಳಿಗೂ ಬೆಂಕಿ ಆವರಿಸಿ ಸಂಪೂರ್ಣ ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Edited By : Nagaraj Tulugeri
PublicNext

PublicNext

07/11/2021 10:02 am

Cinque Terre

79.42 K

Cinque Terre

5

ಸಂಬಂಧಿತ ಸುದ್ದಿ