ಬೆಂಗಳೂರು: ಪಟಾಕಿ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವೊಮ್ಮೆ ಅವಘಡಗಳು ನಡೆದೇ ಬಿಡುತ್ತವೆ. ಈ ಬಾರಿಯ ದೀಪಾವಳಿ ಸಂಭ್ರಮದ ವೇಳೆ ರಾಜ್ಯ ರಾಜಧಾನಿಯಲ್ಲಿ ಸುಮಾರು 25ಕ್ಕೂ ಹೆಚ್ಚು ಮಕ್ಕಳ ದೃಷ್ಟಿಗೆ ಹಾನಿಯಾಗಿದೆ. ಹಾಗೂ 20ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯಗಳಾಗಿವೆ.
ದೃಷ್ಟಿಗೆ ಹಾನಿಯಾದ ಮಕ್ಕಳನ್ನು ಬೆಂಗಳೂರಿನ ಮಿಂಟೋ, ನಾರಾಯಣ ನೇತ್ರಾಲಯ, ಕಾಮಾಕ್ಷಿ ಇನ್ನಿತರ ಆಸ್ಪತ್ರೆಗಳಿಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸುಟ್ಟ ಗಾಯಕ್ಕೆ ಒಳಗಾದವರು ವಿಕ್ಟೋರಿಯಾ, ಬೌರಿಂಗ್ ಮತ್ತಿತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 16, ನಾರಾಯಣ ನೇತ್ರಾಲಯದಲ್ಲಿ 6, ಇನ್ನಿತರ ಆಸ್ಪತ್ರೆಗಳಲ್ಲಿ ಐದಾರು ಮಂದಿ ಚಿಕಿತ್ಸೆ ಪಡೆದಿದ್ದಾರೆ. ಆರೇಳು ಮಂದಿ ಬಿಟ್ಟರೆ ಉಳಿದವರೆಲ್ಲರೂ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಬಸವನಗುಡಿಯ 9 ವರ್ಷದ ಹರ್ಮಾನ್ ಖಾನ್ ಎಂಬ ಬಾಲಕ ಪಟಾಕಿ ಸಿಡಿಸುವಾಗ ಆತನ ಮುಖದ ಮೇಲಿನ ಚರ್ಮ, ಕಣ್ಣುಗಳಿಗೆ ಹಾನಿಯಾಗಿದ್ದು, ಆತ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
PublicNext
07/11/2021 08:29 am