ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಬೀದಿನಾಯಿಗಳ ದಾಳಿ ಬಾಲಕ ಬಲಿ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಸಂತೋಷ ನಗರದಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ.

ಹೌದು ಬೀದಿ ನಾಯಿಗಳ ದಾಳಿಗೆ ಕಲಂದರ್ ಖಾನ್ ಎನ್ನುವ 11 ವರ್ಷದ ಬಾಲಕ ಬಲಿಯಾಗಿದ್ದಾನೆ.ಅಪ್ಪ ಬಾಬಾಜಾನ್ ಖಾನ್ ಬಳಿ ಹೋಗುತ್ತಿದ್ದಾಗ ಏಕಾಏಕಿ ಬಾಲಕನ ಮೇಲೆ ಏರಗಿದ ರಾಕ್ಷಸ ನಾಯಿಗಳ ಗುಂಪಿನ ಭೀಕರ ದಾಳಿಗೆ ಬಾಲಕ ಬಲಿಯಾಗಿದ್ದಾನೆ.

ಸುಮಾರು 20-30 ನಾಯಿಗಳು ಬಾಲಕ ಮೇಲೆ ಅಟ್ಯಾಕ್ ಮಾಡಿ ಕಚ್ಚಿ ಸಾಯಿಸಿವೆ. ಸಂತೋಷ ನಗರದ ಚಿಕನ್, ಮಟನ್ ಅಂಗಡಿಗಳ ತ್ಯಾಜ್ಯಕ್ಕಾಗಿ ಬರೋ ಬಿಡಾಡಿ ನಾಯಿಗಳು ಮನುಷ್ಯರ ಮೇಲೆ ಅಟ್ಯಾಕ್ ಮಾಡುತ್ತಿವೆ. ಇನ್ನು ಬಾಲಕನ ಸಾವಿಗೆ ಮಾಂಸದಂಗಡಿಗಳ ತ್ಯಾಜ್ಯವೇ ಕಾರಣ ಹಾಗಾಗಿ ಮಾಂಸದಂಗಡಿಗಳ ತೆರವಿಗೆ ಸ್ಥಳೀಯರ ಆಗ್ರಹಿಸಿದ್ದಾರೆ.

ಈ ಕುರಿತು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
PublicNext

PublicNext

31/10/2021 12:16 pm

Cinque Terre

67.19 K

Cinque Terre

7

ಸಂಬಂಧಿತ ಸುದ್ದಿ