ಚಂಡೀಗಡ: ಸ್ಕೂಟರ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು, ಕಾಮಗಾರಿಗಾಗಿ ತೋಡಲಾಗಿದ್ದ ರಸ್ತೆಯ ಬೃಹತ್ ಗುಂಡಿಗೆ ಬಿದ್ದು ಗಾಯಗೊಂಡಿರುವ ಘಟನೆ ಪಂಜಾಬ್‍ನ ಲೂದಿಯಾನ ಜಿಲ್ಲೆಯಲ್ಲಿ ನಡೆದಿದೆ.
ತಕ್ಷಣವೇ ಸ್ಥಳೀಯರು ವಿದ್ಯಾರ್ಥಿನಿಯರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿದ್ಯಾರ್ಥಿನಿಯರಿದ್ದ ಸ್ಕೂಟಿ ಗುಂಡಿಗೆ ಬಿದ್ದ ದೃಶ್ಯವು ಸ್ಥಳದಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೊತೆಗೆ ವಿದ್ಯಾರ್ಥಿನಿಯರು ಮೇಲಕ್ಕೆ ಬರಲು ವ್ಯಕ್ತಿಯೊಬ್ಬ ಕಬ್ಬಿಣದ ಏಣಿಯನ್ನು ಹಾಕುತ್ತಿರುವ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
28/10/2021 09:31 pm