ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ರಕ್‌ಗೆ ಬಸ್‌ ಡಿಕ್ಕಿ: ತಪ್ಪಿದ ಭಾರೀ ಅನಾಹುತ- 8 ಜನರಿಗೆ ಗಾಯ

ಮುಂಬೈ: ವೇಗವಾಗಿ ಬಂದ ಬೆಸ್ಟ್ (BEST) ಬಸ್‌ ಟ್ರಕ್‌ಗೆ ಡಿಕ್ಕಿ ಹೊಡೆದ ಘಟನೆ ಬುಧವಾರ ಬೆಳಗ್ಗೆ ಮುಂಬೈನ ದಾದರ್ ಪ್ರದೇಶದಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ.

ರೋಡ್ ಬ್ರೇಕ್ ಇದ್ದಿದ್ದರಿಂದ ಟ್ರಕ್ ಚಾಲಕ ನಿಧಾನವಾಗಿ ಸಾಗುತ್ತಿದ್ದ. ಈ ವೇಳೆ ಹಿಂಭಾಗದಲ್ಲಿ ವೇಗವಾಗಿ ಬಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಾಯಾಳುಗಳನ್ನು ಸಿಯಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ ಚಾಲಕನ ಲಿವರ್‌ಗೆ ಗಾಯವಾಗಿದ್ದು, ಕಂಡಕ್ಟರ್‌ನ ಪಕ್ಕೆಲುಬು ಮುರಿತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Edited By : Shivu K
PublicNext

PublicNext

27/10/2021 05:01 pm

Cinque Terre

76.04 K

Cinque Terre

0

ಸಂಬಂಧಿತ ಸುದ್ದಿ