ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಷ್ಟ್ರ ರಾಜಧಾನಿಯಲ್ಲಿ ದುರಂತ : ಅಗ್ನಿ ಅವಘಡಕ್ಕೆ ಉಸಿರುಗಟ್ಟಿ ನಾಲ್ವರು ಸಾವು

ನವದೆಹಲಿ: ದೆಹಲಿಯ ಓಲ್ಡ್ ಸೀಮಾಪುರಿ ಪ್ರದೇಶದಲ್ಲಿ ಪ್ರದೇಶದಲ್ಲಿಯ 3 ಅಂತಸ್ತಿನ ಹಳೇಯ ಕಟ್ಟಡವೊಂದರಲ್ಲಿ ಅಗ್ನಿ ಅನಾಹುತ ನಡೆದಿದ್ದು ನಾಲ್ವರು ಸಾವನ್ನಪ್ಪಿರುವ ಘಟನೆ ಮಂಗಳವಾರ(ಅಕ್ಟೋಬರ್ 26) ನಡೆದಿದೆ.ಇಂದು ಮುಂಜಾನೆ 4ಗಂಟೆಗೆ ಈ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕದಳ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಮೂರು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯ ಕೋಣೆಯೊಂದರಲ್ಲಿ ನಾಲ್ವರ ಶವ ಸಿಕ್ಕಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾಲ್ವರು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಮೃತರನ್ನು 58 ವರ್ಷದ ಹೊರಿಲಾಲ್, ಪತ್ನಿ (55ವರ್ಷ) ರೀನಾ, 24ವರ್ಷದ ಪುತ್ರ ಆಶು ಹಾಗೂ 18 ವರ್ಷದ ಮಗಳು ರೋಹಿಣಿ ಎಂದು ಗುರುತಿಸಲಾಗಿದೆ. ಹೊರಿಲಾಲ್ ದಂಪತಿಯ ಮತ್ತೊಬ್ಬ ಪುತ್ರ ಅಕ್ಷಯ ಅಗ್ನಿಅವಘಡದಲ್ಲಿ ಬದುಕುಳಿದಿದ್ದು, ಆತ ಎರಡನೇ ಅಂತಸ್ತಿನಲ್ಲಿ ನಿದ್ದೆ ಮಾಡಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ವಿವರಿಸಿದೆ.

ಪ್ರಾಥಮಿಕ ತನಿಖೆಯ ವರದಿ ಪ್ರಕಾರ, ಸೊಳ್ಳೆ ಕಾಯಿಲ್ ಗೆ ಬೆಂಕಿ ಹೊತ್ತಿದ ಪರಿಣಾಮ ಅಗ್ನಿಅವಘಡ ಸಂಭವಿಸಲು ಕಾರಣ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

26/10/2021 11:13 am

Cinque Terre

27.97 K

Cinque Terre

0

ಸಂಬಂಧಿತ ಸುದ್ದಿ