ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಒಕೆ ಹವೇಲಿಯಲ್ಲಿ ಅಪಘಾತ: ಐವರು ದುರ್ಮರಣ

ಹವೇಲಿ: ಪಾಕ್ ಆಕ್ರಮಿತ ಕಾಶ್ಮೀರದ ಹವೇಲಿ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಜೀಪ್ ನಾಲೆಗೆ ಬಿದ್ದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ ನಾಲ್ವರು ಗಾಯಗೊಂಡಿದ್ದಾರೆ.

ವೃತ್ತಿಪರವಲ್ಲದ ಅಜಾಗರೂಕತೆಯ ಚಾಲನೆಯೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ. ಜೀಪ್ ಚಾಲಕ ರಸ್ತೆಯ ಮಧ್ಯದಲ್ಲಿದ್ದ ಕಬ್ಬಿಣದ ರಾಡ್‌ಗಳಿಂದ ವಾಹನವನ್ನು ಬದಿಗೆ ಸರಿಸಲು ಮುಂದಾದಾಗ ಈ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಮೃತ ದೇಹಗಳನ್ನು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ರಕ್ಷಣಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ವಾಹನದಲ್ಲಿದ್ದ ಪ್ರಯಾಣಿಕರು ಒಂದೇ ಕುಟುಂಬಕ್ಕೆ ಸೇರಿದವರು ಮತ್ತು ಮದುವೆಗಾಗಿ ಖ್ವಾಜಾ ಬಂದಿಗೆ ಬಂದಿದ್ದರು ಎಂದು ಎನ್ನಲಾಗಿದೆ.

Edited By : Nagaraj Tulugeri
PublicNext

PublicNext

15/10/2021 07:38 am

Cinque Terre

30.09 K

Cinque Terre

0