ಬೊಲಿವಿಯಾ: ಇಲ್ಲಿನ ವಾಯುಪಡೆಯ ವಿಮಾನವೊಂದು ಅಮೇಜಾನ್ ಅರಣ್ಯದಲ್ಲಿ ಪತನಗೊಂಡಿದೆ. ಪರಿಣಾಮ 6 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಅಮೆರಿಕಾದ ದೇಶ ಬೊಲಿವಿಯಾದ ಈಶಾನ್ಯದಲ್ಲಿರುವ ಬೆನಿ ಪ್ರದೇಶದ ಅಮೇಜಾನ್ ಕಾಡಿನಲ್ಲಿ ಶನಿವಾರ ಈ ದುರಂತ ನಡೆದಿದೆ ಎಂಬ ಮಾಹಿತಿ ಇದೆ.
ವಿಮಾನ ಪತನದಲ್ಲಿ ಇಬ್ಬರು ಸೇನಾ ಪೈಲಟ್ಗಳು, ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ. ಈ ವಿಮಾನ ಅಮೆಜಾನ್ ಕಾಡಿನ ದಟ್ಟವಾದ ಮರಗಳ ಮಧ್ಯೆ ಪತನವಾಗಿದೆ. ಕೆಳಗೆ ಬಿದ್ದ ತಕ್ಷಣ ಬೆಂಕಿ ಹೊತ್ತಿಕೊಂಡು, ಇಡೀ ವಿಮಾನ ಬೆಂಕಿಗೆ ಆಹುತಿಯಾಗಿದೆ. ಅಲ್ಲಿಯೇ ಹತ್ತಿರದಲ್ಲಿ ಇದ್ದ ಅಗುವಾ ಡುಲ್ಸೆ ಎಂಬ ಸಮುದಾಯದ ನಿವಾಸಿಗಳು ವಿಮಾನಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಪ್ರಯತ್ನ ಪಟ್ಟರೂ, ಸಾಧ್ಯವಾಗಲಿಲ್ಲ ಎನ್ನಲಾಗಿದೆ.
PublicNext
10/10/2021 10:39 am