ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
ಯಾದಗಿರಿ: ತಾಯಿ-ಮಗು ಬಾವಿಗೆ ಹಾರಿ ಸಾವನ್ನಪ್ಪಿರೋ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ರತ್ತಾಳ ಗ್ರಾಮದ ಬಳಿ ಇಂದು ನಡೆದಿದೆ.
ರಂಗಂಪೇಟೆಯಿಂದ ರತ್ತಾಳ ಗ್ರಾಮಕ್ಕೆ ತೆರಳುವ ಮಾರ್ಗಮಧ್ಯೆ ಇರೋ ಬಾವಿಯಲ್ಲಿ ತಾಯಿ ದೇವಮ್ಮ ಮಗು ಬೀರಲಿಂಗಯ್ಯ ಇಬ್ಬರ ಶವ ಪತ್ತೆಯಾಗಿದ್ದು, ಹಸನಾಪುರದಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ.
ಇನ್ನು ತಡರಾತ್ರಿ 2ಗಂಟೆ ವೇಳೆಗೆ ಬಾವಿಗೆ ಹಾರಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು, ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ತಾಯಿ-ಮಗುವಿನ ಶವ ಹೊರ ತೆಗೆದಿದ್ದಾರೆ.
ಸ್ಥಳದಲ್ಲಿದ್ದ ಕುಟುಂಬಸ್ಥರ ಆಕ್ರಂದನವಂತೂ ಮುಗಿಲುಮುಟ್ಟಿದ್ದು, ಸಾರ್ವಜನಿಕರು ಸಹ ಕಂಬಿನಿ ಮಿಡಿದಿದ್ದಾರೆ. ಅಲ್ಲದೇ ತಾಯಿ-ಮಗು ಸಾವಿಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಪೊಲೀಸರ ತನಿಖೆ ನಂತರ ಸಾವಿನ ಬಗ್ಗೆ ಸ್ಪಷ್ಟ ಮಾಹಿತಿ ತಿಳಿಯಲಿದೆ.
ಇನ್ನು ಈ ಘಟನೆ ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
PublicNext
09/10/2021 03:58 pm