ಬೆಂಗಳೂರು: ಇದೀಗ ಬಿಬಿಎಂಪಿಯ ಬೇಜವಾಬ್ದಾರಿಗೆ 9 ವರ್ಷದ ಬಾಲಕ ಬಲಿಯಾಗಿದ್ದಾನೆ. ಬೆಂಗಳೂರು ಟಿ.ದಾಸರಹಳ್ಳಿಯ ಮಲ್ಲಸಂದ್ರದ 13ನೇ ವಾರ್ಡ್ ನ ಕೆಂಪೇಗೌಡ ಪಾರ್ಕ್ ನಲ್ಲಿ ಈ ದುರಂತ ಸಂಭವಿಸಿದೆ. ಪ್ರತಾಪ್ ಗಾರ್ಮೆಂಟ್ಸ್ ನೌಕರ ರುದ್ರಮುನಿ ಹಾಗೂ ಕಾಂತಮಣಿ ದಂಪತಿಯ ಪುತ್ರ ಪ್ರತಾಪ್ (9) ಉದ್ಯಾನಕ್ಕೆ ಆಟವಾಡಲು ಹೋದಾಗ ಬಾಲಕ ಈ ಹೊಂಡಕ್ಕೆ ಬಲಿಯಾಗಿದ್ದಾನೆ.
ಅತಿಯಾದ ಮಳೆಯಿಂದಾಗಿ ಪಾರ್ಕ್ನ ತಗ್ಗು ಪ್ರದೇಶದಲ್ಲಿದ್ದ ಈ ಹೊಂಡದಲ್ಲಿ ನೀರು ತುಂಬಿತ್ತು. ಪಾರ್ಕ್ ನಿರ್ವಹಣೆ ಮಾಡಲು ಹಾಗೂ ಭದ್ರತಾ ಸಿಬ್ಬಂದಿ ಇಲ್ಲದಿರುವುದೇ ಅವಘಡಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.
PublicNext
09/10/2021 07:26 am