ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾನವೀಯತೆ ಮರೆತ್ರಾ ಬೆಳಗಾವಿ ಜಿಲ್ಲಾ ಪೊಲೀಸರು?

ಬೆಳಗಾವಿ: ಬೈಕ್ ಸವಾರನಿಗೆ ಹಿಂಬದಿಯಿಂದ ಪೊಲೀಸರ 112 ಹೈವೆ ಪೆಟ್ರೋಲ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಅಥಣಿಯಲ್ಲಿ ಎರಡು ದಿನಗಳ ಹಿಂದೆ ನಡೆದಿದೆ. ಆದರೆ ಅಪಘಾತದ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ಹಿಂತಿರುಗಿ ನೋಡದೆ ಹೋಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದ ಬಳಿ ಅಪಘಾತ ನಡೆದಿತ್ತು. ಸಂಕೋನಟ್ಟಿ ಗ್ರಾಮದ ವಚಲಾ ಶಂಕರ್ ಮಗದುಮ್ (70) ಗುರುಲಿಂಗ ಶಂಕರ್ ಮಗದುಮ್ (50) ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವರು. ಅಥಣಿ ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿರುವ ಗಾಯಾಳುಗಳ ಕುಟುಂಬಸ್ಥರು, "ಆಸ್ಪತ್ರೆಗೆ ದಾಖಲಿಸಿ ಹೋದ ಪೊಲೀಸರು ಈವರೆಗೂ ಗಾಯಾಳುಗಳನ್ನು ವಿಚಾರಿಸಲು ಬಂದಿಲ್ಲ. ಈಗಾಗಲೇ 40 ಸಾವಿರ ರೂಪಾಯಿಗೂ ಅಧಿಕ ಹಣ ಭರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಮಗೆ ನ್ಯಾಯ ಕೊಡಿಸಿ' ಎಂದು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

Edited By : Nagesh Gaonkar
PublicNext

PublicNext

30/09/2021 06:21 pm

Cinque Terre

93.01 K

Cinque Terre

2

ಸಂಬಂಧಿತ ಸುದ್ದಿ