ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೇಘಾಲಯದಲ್ಲಿ ನದಿಗೆ ಬಿದ್ದ ಬಸ್, ನಾಲ್ವರು ಸಾವು ಹಲವರಿಗೆ ಗಾಯ

ಶಿಲ್ಲಾಂಗ್: ತಡರಾತ್ರಿ ಮೇಘಾಲಯದ ಶಿಲ್ಲಾಂಗ್ ನ ನೊಂಗ್ಚ್ರಮ್ ಎಂಬಲ್ಲಿ ಬಸ್ ರಿಂಗ್ಡಿ ನದಿಗೆ ಬಿದ್ದ ಪರಿಣಾಮ ನಾಲ್ವರು ಪ್ರಯಾಣಿಕರು ಮೃತಪಟ್ಟು ಹಲವರು ಗಾಯಗೊಂಡ ಘಟನೆ ನಡೆದಿದೆ. ಬಸ್ ನಲ್ಲಿ ಬಸ್ ನಲ್ಲಿ ಚಾಲಕ ಸೇರಿ ಒಟ್ಟು 22 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಮಧ್ಯರಾತ್ರಿ 12 ಗಂಟೆಹೊತ್ತಿಗೆ ನೊಂಗ್ಚ್ರಮ್ ಬಳಿ ರಿಂಗ್ಡಿ ನದಿಗೆ ಬಿದ್ದಿದೆ. ಬಸ್ ನದಿಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡ ಧಾವಿಸಿ, ಪ್ರಯಾಣಿಕರಿಗೆ ಸಹಾಯ ಮಾಡಿದೆ.

ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ 16 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Edited By : Nirmala Aralikatti
PublicNext

PublicNext

30/09/2021 11:33 am

Cinque Terre

65.95 K

Cinque Terre

1

ಸಂಬಂಧಿತ ಸುದ್ದಿ