ಯಾದಗಿರಿ : ರಸ್ತೆ ಮಧ್ಯೆ ಹೋಗುತ್ತಿದ್ದ ಟಂ ಟಂ ಚಾಲಕ ಏಕಾಏಕಿ ಕಟ್ ಹೊಡೆದ ಪರಿಣಾಮ ಆಟೋ ಪಲ್ಟಿಯಾಗಿರೋ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ನಡೆದಿದೆ.
ರಂಗಂಪೇಟೆಯಿಂದ ಸುರಪುರಕ್ಕೆ ಬರ್ತಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸ್ಥಳದಲ್ಲೇ ಬಿದ್ದಿದ್ದು, ಸುಮಾರು 15 ನಿಮಿಷಕ್ಕೂ ಹೆಚ್ಚು ಟಂಟಂ ರೇಸ್ ನಲ್ಲಿದ್ದ ಕಾರಣ ಗಾಳಿಯಲ್ಲಿ ಹೊಗೆ ಜೋರಾಗಿ ಹೊರ ಹೊಮ್ಮಿದೆ.
ಇನ್ನು ಈ ಟಂಟಂ ಸುರಪುರ ತಾಲ್ಲೂಕಿನ ದೇವರಗೋನಾಲ ಗ್ರಾಮದ ಯಲ್ಲಪ್ಪ ಅವರಿಗೆ ಸೇರಿದ್ದು, ಅದೃಷ್ಟವಶಾತ್ ಆಟೋದಲ್ಲಿ ಯಾರೂ ಪ್ರಯಾಣಿಕರಿರಲಿಲ್ಲ.ಡ್ರೈವರ್ ಗೆ ಸಣ್ಣ- ಪುಟ್ಟ ಗಾಯವಾಗಿದೆ. ಬಳಿಕ ಜನರು ಸೇರಿ ಟಂಟಂ ಮೇಲಕ್ಕೆ ಎತ್ತಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಈ ಘಟನೆ ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
-ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
20/09/2021 03:32 pm