ಹೈದರಾಬಾದ್: ತೆಲುಗು ಚಿತ್ರರಂಗದ ಯುವ ನಟ ಹಾಗೂ ಚಿರಂಜೀವಿ ಕುಟುಂಬದ ಸಾಯಿ ಧರ್ಮ ತೇಜ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ.
ನಿನ್ನೆ ರಾತ್ರಿ 8.30ರ ಸುಮಾರಿಗೆ ಸಾಯಿಧರ್ಮ ತೇಜ್ ಹೈದ್ರಾಬಾದ್‍ನ ಮಾದಾಪುರ್ ಕೇಬಲ್ ಬ್ರಿಡ್ಜ್ ಬಳಿ ಬರುವಾಗ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೆ. ಈ ವೇಳೆ ಪಿಡ್ಸ್ ಬಂದು ಕೋಮಾ ಸ್ಥಿತಿಗೆ ತಲುಪಿದ್ದಾರೆ. ಬಲಗಣ್ಣು, ಬಲಭಾಗದ ಎದೆಗೆ ಗಾಯಗಳಾಗಿದ್ದು, ಭುಜದ ಮೂಳೆ ಮುರಿದಿದೆ. ಮೆದುಳು ಹಾಗೂ ಇತರ ಸೂಕ್ತ ಭಾಗಕ್ಕೆ ಯಾವುದೇ ರೀತಿಯ ಪೆಟ್ಟು ಬಿದ್ದಿಲ್ಲ. ಸದ್ಯ ಕೋಮಾದಲ್ಲಿದ್ದಾರೆ, 24 ಗಂಟೆ ನಿಗಾವಹಿಸಲಾಗಿದೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
PublicNext
11/09/2021 08:47 am