ಗಗನ ಸಖಿ ಕೆಲಸಕ್ಕೆ ಸಂದರ್ಶನ ನೀಡಲು ಹೋಗುತ್ತಿದ್ದ ಯುವತಿ ಅಪಘಾತಕ್ಕೆ ಬಲಿಯಾಗಿದ್ದಾಳೆ.
ನಗರದ ಕುರುಬರಪಾಳ್ಯದ ನಿವಾಸಿ ಗಂಗಾ (22) ಮೃತಪಟ್ಟ ದುರ್ದೈವಿ. ಯುವತಿಯ ಸ್ಕೂಟರ್ ಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಯುವತಿಯ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಸೆಪ್ಟೆಂಬರ್ 3ರಂದು ಯುವತಿ ಕುರುಬರ ಪಾಳ್ಯದ ತನ್ನ ಮನೆಯಿಂದ ಸಂದರ್ಶನ ನೀಡಲು ವಿಮಾನ ನಿಲ್ದಾಣಕ್ಕೆ ಹೊರಟಿದ್ದಳು ಈ ವೇಳೆ ವೇಗವಾಗಿ ಬಂದ ಕ್ಯಾಂಟರ್ ಯುವತಿಯ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.
PublicNext
06/09/2021 07:33 am