ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇರಳದ ಕೊಲ್ಲಂನಲ್ಲಿ ದೋಣಿ ದುರಂತ 4 ಮೀನುಗಾರರು ಮೃತ್ಯು ; 12 ಜನರ ರಕ್ಷಣೆ

ಕೊಲ್ಲಂ: ಕೊಲ್ಲಂ ಕರಾವಳಿಯ ತೀರದಲ್ಲಿ ಮೀನುಗಾರಿಕಾ ದೋಣಿ ಮಗುಚಿ ಬಿದ್ದು ನಾಲ್ವರು ಮೀನುಗಾರರು ಸಾವನ್ನಪ್ಪಿದ್ದಾರೆ. ಇನ್ನು ಈ ದೋಣಿಯಲ್ಲಿದ್ದ ಇತರ 12 ಜನರನ್ನು ರಕ್ಷಿಸಲಾಗಿದ್ದು, ಇದರಲ್ಲಿ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಇನ್ನು ಮೃತಪಟ್ಟವರನ್ನು ಕಾಯಂಕುಳಂ ನಿವಾಸಿಗಳಾದ ಸುದೇವನ್ (51), ಸುನೀಲ್ ದತ್ (24), ಓಚಿರಾ ನಿವಾಸಿಗಳಾದ ಶ್ರೀಕುಮಾರ್ (45) ಹಾಗೂ ನೆಡಿಯತ್ನ ತಂಕಪ್ಪನ್ (60) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಸಮುದ್ರದಲ್ಲಿ ಜೋರಾಗಿ ಗಾಳಿ ಬೀಸಿದ್ದರಿಂದ ದೋಣಿ ಮಗುಚಿತ್ತು. ಈ ವೇಳೆ ಮೀನು ಹಿಡಿಯುವ ಬಲೆ ಕೂಡ ಬೋಟ್ ನಲ್ಲಿ ಸಿಲುಕಿಕೊಂಡು ಈ ದುರಂತ ಸಂಭವಿಸಿದೆ. ಇಂದು ಬೆಳಗಿನ ಜಾವ 5.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಬೆಳಗ್ಗೆ 10 ಗಂಟೆ ವೇಳೆಗೆ ಮೃತದೇಹಗಳನ್ನು ಹುಡುಕಿ, ಹೊರಗೆ ತರಲಾಗಿದೆ.

Edited By : Nirmala Aralikatti
PublicNext

PublicNext

02/09/2021 04:22 pm

Cinque Terre

32.95 K

Cinque Terre

0

ಸಂಬಂಧಿತ ಸುದ್ದಿ