ಚಾಮರಾಜನಗರ: ಕಲಾಪಕ್ಕೆ ಹಾಜರಾಗಲು ಬಂದಿದ್ದ ನಗರಸಭೆ ಸದಸ್ಯನಿಗೆ ಹೃದಯಾಘಾತವಾಗಿ ಕೋರ್ಟ್ ಆವರಣದಲ್ಲಿಯೇ ಸಾವನ್ನಪ್ಪಿದ ಘಟನೆ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಬುಧವಾರ ಸಂಭವಿಸಿದೆ. ನಗರಸಭೆಯ 6ನೇ ವಾರ್ಡಿನ ಸದಸ್ಯ ಸಮೀವುಲ್ಲಾ ಖಾನ್ (45) ಮೃತರು. ಎಸ್ ಡಿಪಿಐ ಪಕ್ಷದ ಕಾರ್ಯಕರ್ತರು 3 ವರ್ಷದ ಹಿಂದೆ ಬಾಬರಿ ಮಸೀದಿ ಧ್ವಂಸ ದಿನದ ನೆನಪಿನಾರ್ಥ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ್ದರು. ಈ ಸಬಂಧ ನಗರಸಭೆ ಸದಸ್ಯ ಸಮೀವುಲ್ಲಾ ಸೇರಿದಂತೆ 104 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರ ಕಲಾಪಕ್ಕೆ ಕೋರ್ಟ್ ಗೆ ಹಾಜರಾಗಿದ್ದರು.
ಇದೇ ವೇಳೆ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆ ಸಾಗಿಲಾಯಿತ್ತಾದರೂ ಬದುಕುಳಿಯಲಿಲ್ಲ.
PublicNext
01/09/2021 06:29 pm