ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಲ್ಲಿ ಭೀಕರ ಅಪಘಾತ : ಜಾಲಿ ರೈಡ್ ಗೂ ಮುನ್ನ ಮದ್ಯ ಖರೀದಿಸಿದ ಯುವತಿಯರು

ಬೆಂಗಳೂರು : ಶಾಸಕರ ಮಗ ಸೇರಿ 7 ಜನ ಕೋರಮಂಗಲದಲ್ಲಿ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸದ್ಯ ಸಾವನ್ನಪ್ಪಿದವರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಆ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಈಗಾಗಲೇ ಪೊಲೀಸರು ಮದ್ಯ ಸೇವಿಸಿ ಅತೀಯಾದ ಸ್ಪೀಡ್ ನಿಂದ ವಾಹನ ಓಡಿಸಿರುವುದರಿಂದ ಈ ಅಪಘಾತ ಸಂಭವಿಸಿದೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ.

ಸದ್ಯ ಪೊಲೀಸರ ಅನುಮಾನಕ್ಕೆ ಪುಷ್ಠಿನೀಡುವಂತೆ ಯುವತಿಯರು ಮದ್ಯ ಖರೀದಿಸಿದ ವಿಡಿಯೋ ವೈರಲ್ ಆಗಿದೆ. ಕೋರಮಂಗಲ ಅಪಘಾತ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಸದ್ಯ ಈ ಅಪಘಾತದ ತನಿಖೆ ವೇಳೆ ಅನೇಕ ವಿಚಾರಗಳು ಹೊರಬೀಳಲಾರಂಭಿಸಿವೆ.

ಹೌದು ಕಾರು ಹತ್ತುವ ಮುನ್ನ ಬಿಂದು ಹಾಗೂ ಇಷಿತಾ ಪಾರ್ಟಿಗೆ ರೆಡಿಯಾಗಿ ಸೋನಿ ವರ್ಲ್ಡ್ ರಸ್ತೆ ಮೂಲಕ ಹೈಫೈ ಮದ್ಯದಂಗಡಿಗೆ ಹೋಗಿದ್ದಾರೆ. ರಾತ್ರಿ 08.40 ರಿಂದ 08.44ರವರೆಗೆ ಮದ್ಯ ಖರೀದಿಸಿ ಬಂದಿದ್ದರು. ಇದಾದ ಬಳಿಕ ಕರುಣ್ ಬಂದು ಪಿಕ್ ಮಾಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದೆಲ್ಲವನ್ನೂ ಗಮನಿಸಿದರೆ ಜಾಲಿರೈಡ್ ಗೂ ಮುನ್ನ ಯುವಕರು ಪಾರ್ಟಿ ನಡೆಸಿದ್ದರೆಂಬ ಶಂಕೆ ವ್ಯಕ್ತವಾಗಿದೆ.

Edited By : Nirmala Aralikatti
PublicNext

PublicNext

01/09/2021 01:39 pm

Cinque Terre

75.65 K

Cinque Terre

2

ಸಂಬಂಧಿತ ಸುದ್ದಿ