ಚಿಕ್ಕೋಡಿ: ರಾಯಬಾಗ ತಾಲೂಕಿನ ನಿಲಜಿ ಗ್ರಾಮದಲ್ಲಿ ವಿದ್ಯುತ್ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿ ವಿದ್ಯುತ್ ತಗುಲಿ ಇಬ್ಬರೂ ಸಹೋದರರು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
25 ವರ್ಷದ ರಾಜು ಬಾಳಪ್ಪ ಬಡಿಗೇರ, ಹಾಗೂ 24 ವರ್ಷದ ಶಂಕರ್ ರಾಮಪ್ಪ ಬಡಿಗೇರ ಮೃತರೆಂದು ಗುರುತಿಸಲಾಗಿದೆ.
ಹೊಲಕ್ಕೆ ನೀರು ಹಾಯಿಸಲು ಬಾವಿಯ ಮೋಟರ್ ಪ್ರಾರಂಭಿಸುವಾಗ ಆಕಸ್ಮಿಕ ವಿದ್ಯುತ್ ತಗುಲಿ ಇಬ್ಬರು ಸಹೋದರರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕುಡಚಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
PublicNext
29/08/2021 06:41 pm