ಯಾದಗಿರಿ : ಕೆಲವು ಸಂದರ್ಭಗಳಲ್ಲಿ ಸಾವು ಹೇಗೆ ಬರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಸದ್ಯ ನೀರು ಕುಡಿಯಲು ಹೋದ ಯುವಕನೋರ್ವ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಾರ್ನಾಳ್ ಬಳಿ ನಡೆದಿದೆ.
22 ವರ್ಷದ ನಾರಾಯಣಪುರ ಗ್ರಾಮದ ಜುಮ್ಮಣ್ಣ ಮೃತ ಯುವಕ. ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ನಿನ್ನೆ ಬಾಯಾರಿಕೆಯಿಂದ ನೀರು ಕುಡಿಯಲು ಹೋದ ವೇಳೆ ಈ ಅವಘಡ ಸಂಭವಿಸಿದೆ. ಇಂದು ಬೆಳಗ್ಗೆ ಮಾರ್ನಾಳ್ ಬಳಿಯ ಕಾಲುವೆಯಲ್ಲಿ ಯುವಕನ ಶವ ಪತ್ತೆಯಾಗಿದೆ. ಈ ಸಂಬಂಧ ನಾರಾಯಣಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
25/08/2021 04:54 pm