ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವುಗಳಿಗೆ ರಾಖಿ ಕಟ್ಟಲು ಹೋಗಿ ಶಿವನ ಪಾದ ಸೇರಿದ: ವಿಡಿಯೋ ವೈರಲ್

ರಕ್ಷಾ ಬಂಧನದ ದಿನ ಎಲ್ಲರೂ ತಮ್ಮ ಅಕ್ಕ-ತಂಗಿಯರಿಂದ ರಾಖಿ ಕಟ್ಟಿಸಿಕೊಂಡು ಸಂಸತಪಡ್ತಾರೆ. ಆದ್ರೆ ಇಲ್ಲೊಬ್ಬ ಭೂಪ ಹಾವುಗಳಿಗೆ ರಾಖಿ ಕಟ್ಟಲು ಹೋಗಿ ಅದೇ ಹಾವಿನಿಂದ ಕಚ್ಚಿಸಿಕೊಂಡು ಶಿವನ ಪಾದ ಸೇರಿದ್ದಾನೆ.

ಕೇವಲ 25 ವರ್ಷ ವಯಸ್ಸಿನ ಮನಮೋಹನ್ ಎಂಬ ಬಿಹಾರಿ ವ್ಯಕ್ತಿ ಈ ಬಾರಿ ರಕ್ಷಾಬಂಧನವನ್ನು ವಿಭಿನ್ನವಾಗಿ ಆಚರಣೆ ಮಾಡಲು ನಿರ್ಧರಿಸಿದ್ದ. ಹೀಗಾಗಿ, ಎರಡು ಹಾವುಗಳನ್ನು ಮನೆಗೆ ತಂದ ಆತ ತನಗೆ ರಕ್ಷಣೆ ನೀಡು ಎಂದು ಆ ಹಾವುಗಳಿಗೆ ರಾಖಿ ಕಟ್ಟಿದ್ದ. ಆದರೆ, ಅದಾದ ಕೆಲವೇ ಸೆಕೆಂಡುಗಳಲ್ಲಿ ಒಂದು ಹಾವು ಆತನ ಕಾಲಿಗೆ ಕಚ್ಚಿದ್ದರಿಂದ ಆತನಿಗೆ ವಿಷ ಏರಿದೆ. ಕೂಡಲೇ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮನಮೋಹನ್ ಸಾವನ್ನಪ್ಪಿದ್ದಾನೆ. ವಿಭಿನ್ನವಾಗಿ ರಕ್ಷಾಬಂಧನ ಆಚರಿಸಲು ಹೋದ ವ್ಯಕ್ತಿ ಇಹಲೋಕವನ್ನೇ ತ್ಯಜಿಸಿದ್ದಾನೆ. ಸದ್ಯ ಈ ಭಯಾನಕ ವಿಡಿಯೋ ವೈರಲ್ ಆಗುತ್ತಿದೆ.

Edited By : Nagesh Gaonkar
PublicNext

PublicNext

23/08/2021 10:51 pm

Cinque Terre

125.84 K

Cinque Terre

21

ಸಂಬಂಧಿತ ಸುದ್ದಿ