ಚಿಕ್ಕಮಗಳೂರು: ಓವರ್ ಲೋಡ್ ಆಗಿ ಟ್ರ್ಯಾಕ್ಟರ್ ಹಿಮ್ಮುಖವಾಗಿ ಪಲ್ಟಿ ಹೊಡೆದಿರುವ ಘಟನೆ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಬಳಿ ಘಟನೆ ನಡೆದಿದೆ.
ಮಾಕೋನಹಳ್ಳಿಯಲ್ಲಿ ಕಟ್ಟಿಗೆ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್, ರಸ್ತೆಯ ಏರಿ ಹತ್ತುವ ವೇಳೆ ಟೈರ್ ಪಂಚರ್ ಆಗಿ ಹಿಂಬದಿಗೆ ಹೋಗಿದೆ. ನಿಯಂತ್ರಣ ತಪ್ಪುತ್ತಿದ್ದಂತೆ ಚಾಲಕ ಟ್ರ್ಯಾಕ್ಟರ್‌ನಿಂದ ಜಿಗಿದು ಜೀವ ಉಳಿಸಿಕೊಂಡಿದ್ದಾನೆ. ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
PublicNext
23/08/2021 09:48 am