ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ರಕ್ ನಲ್ಲಿ ಬಂದ ಜವರಾಯ : ಮಲಗಿದ್ದವರು ಎದ್ದೇಳಲೇ ಇಲ್ಲ..

ಅಮ್ರೇಲಿ : ಅವರೆಲ್ಲ ನಿಮ್ಮದಿಯ ನಿದ್ರೆಯಲ್ಲಿದ್ದರು..ಬೆಳಕಾದ್ರು ಅವರು ಬೆಳಕು ನೋಡಲೇ ಇಲ್ಲ... ನಿದ್ರೆ ಮಾಡುತ್ತಿದ್ದವರು ಚಿರನಿದ್ರೆಗೆ ಜಾರಿದ ಘಟನೆ ಗುಜರಾತ್ ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ. ಹೌದು ರಸ್ತೆ ಬದಿಯಲ್ಲಿ ಗುಡಿಸಲಿನಲ್ಲಿ ಮಲಗಿದ್ದವರ ಮೇಲೆ ಲಾರಿ ಹರಿದ ಪರಿಣಾಮ 8 ಮಂದಿ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಇಂದು ಮುಂಜಾನೆ 2.30ರ ಸಂದರ್ಭದಲ್ಲಿ ಬಾದಂಡ ಗ್ರಾಮದ ರಸ್ತೆ ಪಕ್ಕದ ಗುಡಿಸಲಿನಲ್ಲಿ ನಡೆದಿದೆ.

8 ಮತ್ತು 13 ವರ್ಷದ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾರಿಯಲ್ಲಿ ಕ್ರೇನ್ ಸೇರಿ ಹಲವು ವಸ್ತುಗಳನ್ನು ತುಂಬಿಕೊಂಡು ಹೋಗಲಾಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ಗುಡಿಸಲು ಹಾಗೂ ಪಕ್ಕದಲ್ಲಿ ಮಲಗಿದ್ದವರ ಮೇಲೆ ನುಗ್ಗಿದೆ.

ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಜನರು ರಕ್ತದ ಮಡುವಿನಲ್ಲಿ ಒದ್ದಾಡಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ನಿರ್ಲಿಪ್ ರೈ ತಿಳಿಸಿದ್ದಾರೆ. ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಗುಜರಾತ್ ಸಿಎಂ ವಿಜಯ್ ರೂಪಾನಿ, ಘಟನೆಯಲ್ಲಿ ಸಾವನ್ನಪ್ಪಿರುವ ಜನರ ಕುಟುಂಬಿಕರಿಗೆ ನಾಲ್ಕು ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

Edited By : Nirmala Aralikatti
PublicNext

PublicNext

09/08/2021 12:56 pm

Cinque Terre

52.27 K

Cinque Terre

1

ಸಂಬಂಧಿತ ಸುದ್ದಿ