ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ.. ಲಕ್ಷಾಂತರ ರೂಪಾಯಿ ನಷ್ಟ.!

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕನ್ನೆಳ್ಳಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಆಕಸ್ಮಿಕವಾಗಿ ನಿನ್ನೆ ತಡರಾತ್ರಿ ಮನೆಗೆ ಬೆಂಕಿ ಬಿದ್ದಿದು, ಲಕ್ಷಾಂತರ ರೂಪಾಯಿ ಮೌಲ್ಯದ ಗೃಹಪಯೋಗಿ ವಸ್ತುಗಳು ಹಾಗೂ ಬೆಳ್ಳಿ, ಬಂಗಾರ ಸೇರಿದಂತೆ 80,000 ರೂಪಾಯಿ ಹಣ ಮತ್ತು ಕೆಲ ದಾಖಲೆಗಳು ಸುಟ್ಟು ಕರಕಲಾಗಿವೆ.

ಕನ್ನೆಳ್ಳಿ ಗ್ರಾಮದ ಚಾಂದಬೀ ನದಾಫ್ ಎನ್ನುವವರ ಮನೆಗೆ ಬೆಂಕಿ ಬಿದ್ದಿದ್ದು, ಕುಟುಂಬಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದ್ದು, ಕುಟುಂಬ ತೀರಾ ಸಂಕಷ್ಟದಲ್ಲಿದೆ.

ಇನ್ನು ಸಂಬಂಧಪಟ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಕುಟುಂಬದವರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸುಮಾರು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಸಹಾಯಕ್ಕಾಗಿ ಕುಟುಂಬ ಅಂಗಲಾಚಿದೆ.

----

ಮೌನೇಶ ಬಿ. ಮಂಗಿಹಾಳ,

ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Edited By : Manjunath H D
PublicNext

PublicNext

28/07/2021 05:59 pm

Cinque Terre

46.49 K

Cinque Terre

0

ಸಂಬಂಧಿತ ಸುದ್ದಿ