ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೇರೆಯವರ ಹಸಿವು ತಣಿಸಲು ಹೋಗಿ ಪ್ರಾಣತೆತ್ತ ಡೆಲಿವರಿ ಬಾಯ್ಸ್

ಬೆಂಗಳೂರು: ಸಾವು ಹೇಗೆ ಬರತ್ತೊ ಗೊತ್ತಿಲ್ಲ ಬೇರೆಯವರ ಹಸಿವು ತಣಿಸಲು ಮುಂದಾದ ವ್ಯಕ್ತಿ ಸಾವನಪ್ಪಿದ ಪರಿ ನಿಜಕ್ಕೂ ಎದೆ ಝಲ್ ಎನಿಸುವಂತಿದೆ.

ಸಿಲಿಕಾನ್ ಸಿಟಿಯಲ್ಲಿ ಹಿಟ್ ಆಯಂಡ್ ರನ್ ಗೆ ಯುವಕರಿಬ್ಬರು ಬಲಿಯಾಗಿರುವ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಪಘಾತದ ದೃಶ್ಯ ನೋಡಿದ್ರೆ ಎಂಥವರ ಎದೆಯು ಒಂದು ಕ್ಷಣ ಝಲ್ ಎನ್ನುವಂತಿದೆ.

ಮಂಜುನಾಥ್ ನಗರದ ನಿವಾಸಿಗಳಾದ ಗೌತಮ್ ಮತ್ತು ಶ್ರೀಕಾಂತ ಎಂಬ ಮೃತ ಯುವಕರು ಸ್ವಿಗ್ಗಿ ಡೆಲಿವರಿ ಬಾಯ್ ಗಳಾಗಿ ಕೆಲಸ ಮಾಡುತ್ತ ಜೀವನ ನಡೆಸುತ್ತಿದ್ದರು ನಿನ್ನೆ (ಮಂಗಳವಾರ) ತಮ್ಮ ಕಾಯಕದ ಮೇಲೆ ತಡರಾತ್ರಿ ಜಾಲಹಳ್ಳಿ ವಿಲೇಜ್ ರಸ್ತೆಯ ಅಪಾರ್ಟ್ಮೆಂಟ್ ನಲ್ಲಿ ಊಟ ಡೆಲಿವರಿ ಕೊಡಲು ಹೋಗಿದ್ದರು.

ಈ ವೇಳೆ ಇವರನ್ನೇ ಕಾದು ಕುಳಿತ್ತಿದ್ದ ಜವರಾಯ ಕಾರಿನಲ್ಲಿ ಬಂದು ಇವರ ಪ್ರಾಣ ತೆಗೆದುಕೊಂಡು ಹೋಗಿದ್ದಾನೆ.

ಊಟ ಡೆಲಿವರಿ ಕೊಟ್ಟು ವಾಪಸ್ ಬೈಕ್ ಮೇಲೆ ಕುಳಿತು ಅಲ್ಲಿಂದ ಹೊರಟ ಕೆಲವೇ ಸೆಕೆಂಡ್ ಗಳಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಕಾರು ನೋಡು ನೋಡುತ್ತಿದ್ದಂತೆ ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೇಲಕ್ಕೆ ಹಾರಿ ಬಿದ್ದ ಯುವಕರಿಬ್ಬರ ಪ್ರಾಣವು ಹಾರಿ ಹೋಗಿದೆ.

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್ ಎನಿಸುವಂತಿದೆ. ಘಟನೆ ಸಂಬಂಧ ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
PublicNext

PublicNext

24/02/2021 12:39 pm

Cinque Terre

75.18 K

Cinque Terre

2

ಸಂಬಂಧಿತ ಸುದ್ದಿ