ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈ-ಪುಣೆ ಹೈ ವೇ ನಲ್ಲಿ ಭೀಕರ ಅಪಘಾತ, 5 ಮಂದಿ ಮರಣ

ಪುಣೆ, : ಮುಂಬೈ-ಪುಣೆ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ವಾಹನಗಳು ಸರಣಿಯಾಗಿ ಒಂದಕ್ಕೊಂದು ಡಿಕ್ಕಿಯಾಗಿದ್ದು, ಅಪಘಾತದ ತೀವ್ರತೆಗೆ ವಾಹನಗಳಲ್ಲಿದ್ದ ಐದು ಮಂದಿ ಮೃತಪಟ್ಟಿದ್ದಾರೆ.ಖಪೋಲಿ ಬಳಿ ಮಂಗಳವಾರ ಮುಂಜಾನೆ ಟ್ರಕ್ ಹಾಗೂ ಇನ್ನೆರಡು ವಾಹನ ಡಿಕ್ಕಿಯಾಗಿದ್ದು, ಐವರು ಮೃತಪಟ್ಟು, ಐವರಿಗೆ ತೀವ್ರ ಗಾಯಗಳಾಗಿವೆ.

ಮೃತರ ಪೈಕಿ ನವಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಎನ್ ಎಂಎಂಸಿ) ವೈದ್ಯರು ಸೇರಿದ್ದಾರೆ. ವೈದ್ಯರು ಹಾಗೂ ಕುಟುಂಬಸ್ಥರು ಇದ್ದ ಕಾರು ಟ್ರಕ್ ಡಿಕ್ಕಿಯಾಗಿದೆ. ಮೃತರನ್ನು ಡಾ ವೈಭವ್ ಝಾಂಜರೆ, ಅವರ ತಾಯಿ ಹಾಗೂ ಪತ್ನಿ ಮತ್ತು ಪುತ್ರಿ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಖಲಾಪುರ್ ಟೋಲ್ ಪ್ಲಾಜಾ ಬಳಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ಹಿಂಬದಿಯಿಂದ ಟ್ರಕ್ ಬಲವಾಗಿ ಡಿಕ್ಕಿ ಹೊಡಿದಿದೆ. ಟ್ರಕ್ ಚಾಲಕ ಅತಿ ವೇಗದಿಂದ ಚಾಲನೆ ಮಾಡಿದ್ದು ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Edited By : Nirmala Aralikatti
PublicNext

PublicNext

16/02/2021 10:51 am

Cinque Terre

67.55 K

Cinque Terre

2